ಅವನಿ ಲೇಖರ (ಜನನ 8 ನವೆಂಬರ್ 2001) ಒಬ್ಬ ಭಾರತೀಯ ಪ್ಯಾರಾಲಿಂಪಿಯನ್ ಮತ್ತು ರೈಫಲ್ ಶೂಟರ್ . ಟೋಕಿಯೊ ೨೦೨೦ ಪ್ಯಾರಾಲಿಂಪಿಕ್ಸ್‌ನಲ್ಲಿ ಅವರು 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್‌ನಲ್ಲಿ ಚಿನ್ನದ ಪದಕ ಮತ್ತು 50 ಮೀಟರ್ ಏರ್ ರೈಫಲ್ ಸ್ಟಾಂಡಿಂಗ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಲೇಖರ ಪ್ರಸ್ತುತ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ SH1 (ವಿಶ್ವ ಶೂಟಿಂಗ್ ಪ್ಯಾರಾ ಸ್ಪೋರ್ಟ್ ರ್ಯಾಂಕಿಂಗ್ಸ್) ನಲ್ಲಿ ವಿಶ್ವ ನಂ ೫ . ಇವರು ೨೦೨೧ರ ವರ್ಲ್ಡ್ ಪ್ಯಾರಾ ಶೂಟಿಂಗ್ ವರ್ಲ್ಡ್ ಕಪ್ ನಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ . ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮದ ಮೂಲಕ ಅವಳನ್ನು ಗೋಸ್ಪೋರ್ಟ್ಸ್ ಫೌಂಡೇಶನ್ ಬೆಂಬಲಿಸಿದೆ. ಒಂದೇ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಇವರು . ರಾಜಸ್ಥಾನ ಸರ್ಕಾರವು ಆಕೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಎಸಿಎಫ್) ಹುದ್ದೆಯನ್ನು ನೀಡಿ ಗೌರವಿಸಿದೆ. == ಪ್ಯಾರಾಲಿಂಪಿಕ್ಸಿನಲ್ಲಿ ಸಾಧನೆ == ಲೇಖರ ಪ್ಯಾರಾಲಿಂಪಿಕ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. ಲೇಖರ ೨೦೨೦ ರ ಬೇಸಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮೊದಲ ಚಿನ್ನದ ಪದಕವನ್ನು ಗೆದ್ದರು. ಅಂತಿಮ ಈವೆಂಟ್‌ನಲ್ಲಿ 249.6 ಪಾಯಿಂಟ್‌ಗಳ ಸ್ಕೋರ್‌ನೊಂದಿಗೆ, ಯುವ ಶೂಟರ್ ಪ್ಯಾರಾಲಿಂಪಿಕ್ ದಾಖಲೆಯನ್ನು ನಿರ್ಮಿಸಿದರು ಮತ್ತು ವಿಶ್ವ ದಾಖಲೆಯನ್ನು ಸರಿಗಟ್ಟಿದರು. ಅವರು ೨೦೧೫ ರಲ್ಲಿ ಮಾಜಿ ಒಲಿಂಪಿಕ್ ಚಾಂಪಿಯನ್ ಅಭಿನವ್ ಬಿಂದ್ರಾ ಅವರಿಂದ ಸ್ಫೂರ್ತಿ ಪಡೆದರು ಮತ್ತು ನಂತರ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ೩ ಸೆಪ್ಟೆಂಬರ್ ೨೦೨೧ ರಂದು, ಮಹಿಳೆಯರ 50 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಕಂಚು ಗೆದ್ದ ನಂತರ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಎರಡು ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಪ್ಯಾರಾಲಿಂಪಿಯನ್ ಆದರು. ಅವರು ಪ್ರಸ್ತುತ ಭಾರತೀಯ ಶೂಟರ್ ಸುಮಾ ಶಿರೂರ್ ಅವರಿಂದ ತರಬೇತಿ ಪಡೆದಿದ್ದಾರೆ. == ವೈಯುಕ್ತಿಕ ಬದುಕು == ೨೦೧೨ ರಲ್ಲಿ ನಡೆದ ಕಾರು ಅಪಘಾತದ ನಂತರ ೧೧ ನೇ ವಯಸ್ಸಿನಲ್ಲಿ ಆಕೆಗೆ ಸಂಪೂರ್ಣ ಪಾರ್ಶ್ವವಾಯು ಉಂಟಾಯಿತು . ನಂತರ ಅವರ ತಂದೆ ಅವರನ್ನು ಕ್ರೀಡೆಗೆ ಸೇರಲು ಪ್ರೋತ್ಸಾಹಿಸಿದರು. ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆಯುತ್ತಿದ್ದರೂ ಅವರಿಗೆ ಶೂಟಿಂಗಿನಲ್ಲಿ ಆಸಕ್ತಿ ಮೂಡಿ ಆ ಕ್ರೀಡೆಯತ್ತ ಹೊರಳಿದರು. ಅವರು ಪ್ರಸ್ತುತ ಭಾರತದ ರಾಜಸ್ಥಾನದಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದಾರೆ. == ಉಲ್ಲೇಖಗಳು == == ಇವನ್ನೂ ನೋಡಿ == ಒಲಂಪಿಕ್ ಕ್ರೀಡಾಕೂಟ